Index   ವಚನ - 16    Search  
 
ಎತ್ತು ಹಸುವ ಹಾಯಾಲಾಗಿ ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ ತೆಕ್ಕೆಗೆ ನಡೆಯದ ಹಸು, ಕಟ್ಟುಗೊಳ್ಳದ ಹೋರಿ. ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ? ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ ಹೋಯಿತ್ತು, ಹಸು ಬೆತ್ತಲೆಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.