ಎನ್ನ ಕ್ರಿಯಾಜ್ಞಾನದ ಕೂಟ
ಮಡಕೆ ಮಣ್ಣಿನಂತಾಯಿತ್ತಯ್ಯಾ,
ಭ್ರಮರ ಗಂಧದಂತಾಯಿತ್ತು ತಂದೆ.
ಮಧುರ ವಾಣಿಯಂತೆ
ಸರ ಶರಧಿಯಂತಾಯಿತ್ತಯ್ಯಾ.
ಅಮೃತ ಅಮೃತದಂತಾಯಿತ್ತು.
ಬೆಳಗಿನಂತೆ ಬಯಲು ಬೆಳಗಿನಂತಾಯಿತ್ತು.
ಎಡೆ ಬಿಡುವಿಲ್ಲದೆ ಕಡೆನಡು ಮೊದಲೆನ್ನದೆ
ಸಕ್ಕರೆಯ ದಂಡದಂತೆ ಆ ಗುಣವೆತ್ತಲೂ ಸರಿ,
ಎಲೆ ಅಚ್ಯುತಪ್ರಿಯ, ರಾಮನಾಥಾ ನಿಮ್ಮಲ್ಲಿ ಎನಗೆ.
Art
Manuscript
Music
Courtesy:
Transliteration
Enna kriyājñānada kūṭa
maḍake maṇṇinantāyittayyā,
bhramara gandhadantāyittu tande.
Madhura vāṇiyante
sara śaradhiyantāyittayyā.
Amr̥ta amr̥tadantāyittu.
Beḷaginante bayalu beḷaginantāyittu.
Eḍe biḍuvillade kaḍenaḍu modalennade
sakkareya daṇḍadante ā guṇavettalū sari,
ele acyutapriya, rāmanāthā nim'malli enage.