ಅಗದಂತೆ ಆದೆನು,
ಜಗವ ಆಗುವ ಕಂಡು ಬಲ್ಲೆನಾಗಿ ಒಲ್ಲೆನು.
ಜಗ ನಿಲ್ಲದು ಕಂಡಯ್ಯಾ.
ಮಾಡಿ ಮಾಡಿ ಕೆಡಿಸದಿರಾ,
ನೀ ನಾಡಿಂಗೆ ಮರುಳಾಗದಿರಾ!
ಬೇಡು ಗುಹೇಶ್ವರಾ ನಿರಾಳವನೆನ್ನಲ್ಲಿ.
Transliteration Agadante ādenu,
jagava āguva kaṇḍu ballenāgi ollenu.
Jaga nilladu kaṇḍayyā.
Māḍi māḍi keḍisadirā,
nī nāḍiṅge maruḷāgadirā!
Bēḍu guhēśvarā nirāḷavanennalli.
Hindi Translation न होनेवाला हुआ, जगत्, सृष्टी देख जानने से नहीं चाहिए।
जग नहीं रुकता देखो।
कर कर मत बिगाड़ो, तुम लोगों जैसे बावला मत बन।
निराला को मुझसे माँग गुहेश्वरा ।
Translated by: Eswara Sharma M and Govindarao B N
Tamil Translation பிறவாநிலை எய்தினேன். பிறவிஎய்தும் வழியை
உணர்ந்துள்ளேன் எனவே அதனை நான் நயவேன்
உலகம் நிலையானதன்று, செய்துசெய்துகெடாதீர்
நாட்டிலே நீ மருட்சி எய்யாது இருப்பாய்
இதயம் நிறைந்து விரும்புவாய் குஹேசுவரனை
நிலைத்தமெய்ப்பொருளை என் அனுபவச் சொற்களை ஏற்பாய்
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಗದಂತೆ = ಹುಟ್ಟದಂತೆ; ಆಗಿ = ಅದಾಗಿ, ಆದುದರಿಂದ; ಆಗುವ = ಹುಟ್ಟುವ ಹೊಂದುವ(ಬಗೆಯನು); ಆದೆನು = ಭವಮುಕ್ತನಾದೆನು, ಅಭವನಾದೆನು; ಎನ್ನಲ್ಲಿ = ನನ್ನ ಅನುಭವದ ಮಾತುಗಳಲ್ಲಿ; ಒಲ್ಲೆನು = ನಾನು ಅದನು ಬಯಸೆನು; ಕಂಡು = ಕಣ್ಣಾರೆ ಕಂಡು; ಕೆಡಿಸದಿರು = ನಿನ್ನ ಆಯುಷ್ಯವನ್ನು ಹಾಳುಮಾಡಬೇಡ; ನಾಡಿಂಗೆ = ನಾಡವರೆಲ್ಲರೂ ಮರುಳಾಗುತ್ತಾರೆಂದು; ನಿರಾಳವನು = ಅಜರ ಅಮರವಾದ ನಿತ್ಯಸತ್ಯವನು; ನಿಲ್ಲದು = ಸ್ಥಿರವಾಗಿರದು; ಬಲ್ಲೆನು = ತಿಳಿದುಕೊಂಡಿದ್ದೇನೆ; ಬೇಡು = ಹೃದಯಾರೆ ಬಯಸು; ಮರುಳಾಗದಿರು = ನೀನೂ ಮರುಳಾಗಬೇಡ; ಮಾಡಿ ಮಾಡಿ = ಅಸ್ಥಿರ ವಿಷಯಗಳ ಸಂಪಾದನೆಗಾಗಿ ದುಡಿದೂ ದುಡಿದೂ;
Written by: Sri Siddeswara Swamiji, Vijayapura