ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು.
ಕಾನನದ ಕಿಚ್ಚು ಬಂದು ಊರೊಳಗೆ ಉರಿಯಿತ್ತು.
ಆರಿಸಿರೊ ಆರಿಸಿರೊ ನಾಲ್ಕುದಿಕ್ಕಿನ ಬೇಗೆಯ.
ಆ ಭೂಭಾಕರ ದೃಷ್ಟಿ ಮುಟ್ಟಿದಡೆ
ಅಟ್ಟೆ ಸಹಸ್ರವಾಡಿತ್ತು!
ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರಾ.
Transliteration Ūroḷagaṇa kiccu kānanadalli uriyittu.
Kānanada kiccu bandu ūroḷage uriyittu.
Ārisiro ārisiro nālkudikkina bēgeya.
Ā bhūbhākara dr̥ṣṭi muṭṭidaḍe
aṭṭe sahasravāḍittu!
Lekkavillada maraṇa maḍiyittu guhēśvarā.
English Translation 2 The fires of the city burned in the forest,
forest fires burned in the town.
Listen, listen to the flames
of the four directions.
Flapping and crackling in the vision
a thousand bodies dance in it
and die countless deaths,
O Lord of Caves.
Translated by: A K Ramanujan
Book Name: Speaking Of Siva
Publisher: Penguin Books
---------------------
Hindi Translation गाँव की अग्नि कानन में जली।
कानन की अग्नि गाँव में जली।
बुझा दो बुझा दो चार दिशाओं की अग्नि को
उस भू भूकार दृष्टि लगी तो शरीर नाश हुआ।
बिना हिसाब मरण हुए गुहेश्वरा ।
Translated by: Eswara Sharma M and Govindarao B N
Tamil Translation ஊரிலுள்ள தீ காட்டை எரித்தது.
காட்டிலுள்ள தீ ஊரை எரித்தது.
அணைப்பீர், அணைப்பீர், நான்கு திசையின் வெப்பத்தை
அச்சம்நல்கி, பரவிக்கொண்டுள்ள தீயை, சிவோஹம்
என்னுமுணர்வு தீண்டின் உடல் சுக்குநூறாகச் சிதறுவதைப்
போன்றதாம் எண்ணற்ற மரணம் மடிந்தது குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಟ್ಟೆ ಸಹಸ್ರವಾಡು = ನಷ್ಟವಾಗು; ಆ ಭೂಭೂಕಾರ = ಭಯಂಕರವಾಗಿ ಹರಡುತ್ತಲಿರುವ ಸಂಸಾರಾಗ್ನಿ; ಉರಿ = ಧಗಧಗಿಸು; ಊರು = ಪಂಚಭೂತಗಳಿಂದಾದ ತನು-ಮನ; ಕಾನನ = ಚರಾಚರ ಜಗತ್ತು; ಕಿಚ್ಚು = ಸಂಸಾರಾಗ್ನಿ; ದೃಷ್ಟಿ = ಶಿವದೃಷ್ಟಿ, ಆತ್ಮಾನಾತ್ಮ ವಸ್ತುವಿವೇಕ, ಶಿವೋSಹಂ ಎಂಬ ಪ್ರಜ್ಞೆ; ಮಡಿ = ನಾಶವಾಗು; ಲೆಕ್ಕವಿಲ್ಲದ ಮರಣ = ಜನ್ಮಮರಣಪ್ರವಾಹರೂಪ ಭವ;
Written by: Sri Siddeswara Swamiji, Vijayapura