ಪರಿಣಾಮದೊಳಗೆ ಮನದ ಪರಿಣಾಮವೆ ಚೆಲುವು.
ಸಂಗದೊಳಗೆ ಶರಣರ ಸಂಗವೆ ಚೆಲವು.
ಕಾಯಗೊಂಡು ಹುಟ್ಟಿದ ಮೂಢರೆಲ್ಲರು
ಸಾಯದ ಸಂಚವನರಿವುದೆ ಚೆಲುವು-ಗುಹೇಶ್ವರಾ.
Transliteration Pariṇāmadoḷage manada pariṇāmave celuvu.
Saṅgadoḷage śaraṇara saṅgave celavu.
Kāyagoṇḍu huṭṭida mūḍharellaru
sāyada san̄cavanarivude celuvu-guhēśvarā.
Hindi Translation परिणाम में मन का परिणाम ही शोभा।
संग में शरण संग ही शोभा।
शरीर धारण कर जनमें सब मूढ
बिना मृत्यु की युक्ति जानना, शोभा गुहेश्वरा ।
Translated by: Eswara Sharma M and Govindarao B N
Tamil Translation இன்பத்தினுள்ளே மனத்தின் இன்பமே அழகு
தொடர்பினுள்ளே சரணரின் தொடர்பே அழகு
உடலைப்பெற்றுத் தோன்றியுள்ள அஞ்ஞானியர்
இறவாத விவேகத்தை அறிவது அழகாம் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಪರಿಣಾಮ = ತೃಪ್ತಿ, ಆನಂದ; ಮನದ ಪರಿಣಾಮ = ಮನವು ಉನ್ಮನಗೊಂಡಾಗ, ಅಮನಸ್ಕಸ್ಥಿತಿ ಪ್ರಾಪ್ತವಾದಾಗ ಅನುಭವಕ್ಕೆ ಬರುವ ಪರಮಾನಂದ; ಮೂಢರು = ಅಜ್ಞರು, ವ್ಯಾಮೋಹದಲ್ಲಿ ಸಿಲುಕಿದವರು; ಸಂಗ = ಸಹವಾಸ; ಸಂಚು = ಯುಕ್ತಿ;
Written by: Sri Siddeswara Swamiji, Vijayapura