Index   ವಚನ - 73    Search  
 
ಬಿತ್ತಿದ ಬೆಳೆಯ ಪೃಥ್ವಿ ನುಂಗಿದಾಗ ಬಿತ್ತದ ವಟ್ಟ ಎಂತಪ್ಪುದೋ? ಇಷ್ಟಲಿಂಗವ ಚಿತ್ತ ನುಂಗಿದಾಗ ಭಕ್ತಿಯ ಹೊಲ ಎಂತಪ್ಪುದೊ? ಮಾರ್ಗವ ಕೇಳುವ ಶಿಷ್ಯ ಪ್ರತ್ಯುತ್ತರಗೆಯ್ದಲ್ಲಿ ಭೃತ್ಯನಹ ಪರಿಯಿನ್ನೆಂತೊ? ಇದರಚ್ಚುಗವ ನೋಡಾ, ನಾರಾಯಣಪ್ರಿಯ ರಾಮನಾಥಾ.