Index   ವಚನ - 84    Search  
 
ಯೋನಿ ಒಂದರಲ್ಲಿ ಬಂದೆನೆಂದಡೆ ಹಿಂಚುಮುಂಚಿಲ್ಲವೆ? ರತ್ನಕುಲ ಒಂದಾದಡೆ ಕಾಲಿಗೂ ಸರಿ, ಕೈಗೂ ಸರಿಯೆ? ನಾ ನುಡಿದೆಹೆನೆಂದಡೆ ಕಡೆನಡು ಮೊದಲಿಲ್ಲ. ಅಂಜನವನಿಕ್ಕಿ ನಿಧಾನವ ಕಾಬಂಗೆ ಬರುಬದೊಂದಾಗಿ ಸಂಗವೇತಕ್ಕೆ? ನಾರಾಯಣಪ್ರಿಯ ರಾಮನಾಥಾ.