Index   ವಚನ - 13    Search  
 
ಅರಿವೆಂಬ ಅಲಗಿಂಗೆ ಕುರುಹಿನ ಮೋಹಳ ನೋಡಾ! ಒರೆ ಹರಿದು ಒಳಗನಿರಿಯಲು ಬಲ್ಲವರಿಲ್ಲ. ಶಂಕೆ ಸಮ್ಯಕ್ಕಿಲ್ಲಾಗಿ ಅಂತಿಂತೆನಲಿಲ್ಲ. ಅಂಕವ ಕಾಣದೆ ಬೇಳುವೆಗೊಳಗಾದಿರಲ್ಲಾ! ನಿರ್ಲೇಪವಹ ಅಂಕಕ್ಕೆ ಹರಿವರಿವುದೆ ಗೆಲವು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬೆನು.