Index   ವಚನ - 21    Search  
 
ಆರನೂ ಹಾರದ ಲಿಂಗವ ತೋರುವಾತ ಗುರುವಲ್ಲ. ನೆಳಲಲಿಪಿಯ, ಕರಣಾದಿಗಳ ಲೀಯವ ಮುಂದೆ ಬಲ್ಲವರಾರೊ? ಶಿಲೆಯ ಶಬುದದ ಉಲುಹಿನಂತುಟ ನಿಲಿಸಿ ತೋರಲು, ರೂಪನಲ್ಲ.ಕಲುಮನದ ಅಶುದ್ಧಕಾರಿಗಳಿಗಿನ್ನೆಂತೊ? ನಾಟಕ ಜನಂಗಳೆಲ್ಲ ಕಂಡೆವೆನುತ ಕೋಟಲೆಗೊಳುತ್ತಿದ್ದರು. ಈ ನೋಟದೊಳಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಇಲ್ಲ ಇನ್ನೆಂತೊ?