Index   ವಚನ - 22    Search  
 
ಆರು ಪರಿಯಲ್ಲಿ ಹೆಸರಿಟ್ಟುಕೊಂಡವರ ನೋಡ ಬಂದೆ! ಆರೂಢವಿಲ್ಲದೆ ಲಿಂಗಾರ್ಚನೆಯ ಮಾಡುವರನೆನಬಂದೆ! ಆರೂಢ ಲಿಂಗಾರ್ಚನೆಯ ಮಾಡಿ ಪ್ರಸಿದ್ಧಪ್ರಸಾದವ ಗ್ರಹಿಸಲರಿಯದವರಿಗೆ ರೂಢಿಯಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆನಬಂದೆ.