Index   ವಚನ - 23    Search  
 
ಆಸೆಗಾಗಿ ವೇಷವ ಹೊತ್ತು ತಿರುಗುವ ವೇಷದ ಗಂಡ, ಈಷಣತ್ರಯಕ್ಕಾಗಿ ಈಶನ ಪೂಜಿಸು ದಾಸರ ಗಂಡ, ಇಷ್ಟನರಿದು ತನುವಿಗೆ ಆಸೆಯ ಮಾಡುವ ಭಾಷೆವಂತರ ಗಂಡ. ನಾನಂಜುವೆ ತ್ರಿವಿಧದ ಹಂಗಳಿದವರಿಗೆ, ನಾನವರಿಗಿಳಿದ ಬಂಟ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.