Index   ವಚನ - 121    Search  
 
ವಾಯದ ರಾಸಿಗೆ ಮಾಯದ ಕೊಳಗ ಅಳೆವುದು ನೆಳಲು, ಹೊಯಿವುದು ಬಯಲು. ತುಂಬಿಹೆನೆಂದಡೆ ತುಂಬಲು ಬಾರದು. ತುಂಬಿದ ರಾಸಿಯ ಕಾಣಲು ಬಾರದು. ಅಳತೆಗೆ ಬಾರದು; ಹೊಯ್ಲಿಗೊಳಗಾಗದು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ಮಿಗೆ ಬಯಲು.