ಆತ್ಮನೆಂತಪ್ಪಡೆ,
ನಿರವಯ ನಿರ್ಗುಣ ನಿರ್ವಿಕಾರ!
ನೋಡುವಡೆ,
ಕರ್ಮವ ಮಾಡುವವರಾರೊ?
ಅಲ್ಲಿ ಸಂಸಾರವಾರಿಗೆ ತೋರಿತ್ತೊ?
ಬಂಧ ಮೋಕ್ಷಗಳಾರಿಗೆ, ಎಲೆ ಅಯ್ಯಾ?
ನಿನ್ನ ನಿನ್ನಿಂದ ತಿಳಿದು ನೋಡಲು
ತಥ್ಯಮಿಥ್ಯಗಳೊಂದಕ್ಕೊಂದು ತಟ್ಟಲರಿವವೆ?
ಪುಸಿಮಾಯೆ ತೋರಿತ್ತು ; ಸೋಜಿಗ, ಭ್ರಮೆ!
ದಿಟ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!
Art
Manuscript
Music
Courtesy:
Transliteration
Ātmanentappaḍe,
niravaya nirguṇa nirvikāra!
Nōḍuvaḍe,
karmava māḍuvavarāro?
Alli sansāravārige tōritto?
Bandha mōkṣagaḷārige, ele ayyā?
Ninna ninninda tiḷidu nōḍalu
tathyamithyagaḷondakkondu taṭṭalarivave?
Pusimāye tōrittu; sōjiga, bhrame!
Diṭa nīne, sim'maligeya cennarāmā!