Index   ವಚನ - 37    Search  
 
ಕಿಚ್ಚು ದೈವವೆಂದು ಹವಿಯ ಬೇಳುವರು. ಕಿಚ್ಚು ಹಾರುವರ ಮನೆಯ ಸುಡುವಾಗ ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ ಬೊಬ್ಬಿರಿದೆಲ್ಲರ ಕರೆವರು. ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ ವಂದಿಸುವುದ ಬಿಟ್ಟು ನಂದಿಸುತ್ತಿಪ್ಪರು.