Index   ವಚನ - 38    Search  
 
ಕುರುಡ ಕಾಣನೆಂದು, ಕಿವುಡ ಕೇಳನೆಂದು ಹೆಳವ ಹರಿಯನೆಂದು, ಮರುಳ ಬಯ್ದನೆಂದು, ಪಿಶಾಚಿ ಹೊಯ್ದನೆಂದು ಮನಕತಬಡುವರೆ ಹೇಳಾ? ತಾನರಿವುಳ್ಳಾತ ತತ್ವವನರಿಯದವರಲ್ಲಿ ಗುಣದೋಷವನರಸುವರೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.