Index   ವಚನ - 43    Search  
 
ಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು. ಶರಣೆನ್ನಲೊಲ್ಲದೀ ಮನವು. ಆಳಿನ ಭಕ್ತಿಯನರಿಯರಾಗಿ ಶರಣೆನ್ನಲೊಲ್ಲದೀ ಮನವು. ಆಳ್ದನೆಂದು ನಂಬಿ ನಂಬಲೊಲ್ಲದಾಗಿ, ಸಿಮ್ಮಲಿಗೆಯ ಚೆನ್ನರಾಮನೆನ್ನಕಡೆ ನೋಡಿ ನಗುತಲಿದ್ದಾನೆ.