ನಾಯ ಕುನ್ನಿಯ ಕಚ್ಚಬೇಡ,
ಬಗುಳಬೇಡವೆಂದಡೆ ಮಾಣ್ಬುದೆ?
ಹಂದಿಯನಶುದ್ಧವ ತಿನಬೇಡ,
ಹೊರಳಬೇಡವೆಂದಡೆ ಮಾಣ್ಬುದೆ?
ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ?
ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Nāya kunniya kaccabēḍa,
baguḷabēḍavendaḍe māṇbude?
Handiyanaśud'dhava tinabēḍa,
horaḷabēḍavendaḍe māṇbude?
Nayadi bud'dhigalisidaḍe māṇbave tam'ma sahajava?
Durviṣayige sadguru bōdheyinda nirviṣayavappude hēḷā,
sim'maligeya cennarāmā.