ನಿಜದಿಂದ ಕ್ಷತ್ರಿಯನೆಂದು
ನಿಜವನರಿಯದ ಕರ್ಣನ ವ್ಯಾಧಭಾಧೆ ಬಿಡದಂತೆ
ತಾನು ತನ್ನ ನಿಜವನರಿದಡೂ
ಜಾತಿಯಾಶ್ರಮ ಗುಣಧರ್ಮ
ಜೀವಾದಿ ಭೇದಂಗಳೊಳಗಾದ
ಮಾಯಾಮಯಂಗಳೆಂಬ ಮುನ್ನಿನ ಭ್ರಮೆಗಳ
ಬಿಡಲರಿಯದ ಬಡ ಮನುಜರೆಲ್ಲರೂ
ನಿಜಗುಣನ ನಿಜಭಾವದಲೂ ನಿಲ್ಲದವಂಗೆ
ನಿಜಸುಖವು ಸಾಧ್ಯವಪ್ಪುದೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Nijadinda kṣatriyanendu
nijavanariyada karṇana vyādhabhādhe biḍadante
tānu tanna nijavanaridaḍū
jātiyāśrama guṇadharma
jīvādi bhēdaṅgaḷoḷagāda
māyāmayaṅgaḷemba munnina bhramegaḷa
biḍalariyada baḍa manujarellarū
nijaguṇana nijabhāvadalū nilladavaṅge
nijasukhavu sādhyavappude hēḷā,
sim'maligeya cennarāmā.