Index   ವಚನ - 81    Search  
 
ನಿಜವಸ್ತುವೊಂದೆ, ಎರಡಾಗಬಲ್ಲುದದೊಂದೆ, ಬೇರೆ ತೋರಬಲ್ಲುದದೊಂದೆ, ತನ್ನ ಮರೆಯಬಲ್ಲುದದೊಂದೆ, ತಾನಲ್ಲದನ್ಯವಿಲ್ಲೆಂದರಿದರಿವು ತಾನೇ, ಸಿಮ್ಮಲಿಗೆಯ ಚೆನ್ನರಾಮಾ.