Index   ವಚನ - 98    Search  
 
ಪರಮಾತ್ಮನಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ. ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ತ. ಅಂತಪ್ಪ ಜೀವಾಂತರಾತ್ಮಾದಿಗಳು ಅಂಗಪ್ರಾಣವಾದಲ್ಲಿ ಒಂದೆಯೆನಿಸಿದರು. ಆ ಒಂದೆಯೆಂಬ ತಾಮಸ ಜೀವನು ಅಂಗನೆಯರ ಸಂಗ ಮೊದಲಾದ ನಾನಾ ದುಃಖಗಳಲ್ಲಿ ನೋವುತ್ತ, ನಾನಾಯೋನಿಗಳಲ್ಲಿ ಜನಿಸುತ್ತ, ರೌರವ ನರಕ ಆಳುತ್ತ ಮುಳುಗುತ್ತಲಿಹನು. ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು ನಾಹಂ ಎನ್ನದೆ ಸೋಹಂ ಎನ್ನುತ್ತ ಸಿಮ್ಮಲಿಗೆಯ ಚನ್ನರಾಮನೆಂಬ ಅಖಂಡಲಿಂಗದೊಳಗೆ ನಿತ್ಯತ್ವವನೆಯ್ದಿ ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು.