ತಲೆಯ ಮೇಲೆ ತಲೆಯಿದ್ದಿತ್ತಲ್ಲಾ!
ಆ ತಲೆಯಾ ತಲೆ ನುಂಗಿತ್ತಲ್ಲಾ!
ಸತ್ತು ಹಾಲ ಸವಿಯ ಬಲ್ಲಡೆ,
ಎರಡರ ಕೀಲ ಬಲ್ಲಡೆ, ಅದು ಯೋಗ!
ಶಿಶು ಕಂಡ ಕನಸಿನಲುಳ್ಳ ತೃಪ್ತಿ
ನಿನ್ನಲ್ಲಿ ಉಂಟೆ ಗುಹೇಶ್ವರಾ?
Transliteration Taleya mēle taleyiddittallā!
Ā taleyā tale nuṅgittallā!
Sattu hāla saviya ballaḍe,
eraḍara kīla ballaḍe, adu yōga!
Śiśu kaṇḍa kanasinaluḷḷa tr̥pti
ninnalli uṇṭe guhēśvarā?
English Translation 2 Above a head there is a head;
And the head above
Has swallowed
The head below...
Tell me, pray,
If you can drink milk, being dead;
And
What links up the twain,
Each to each!
O Guheśvara,
I have seen in Thee
The joy a child finds
In a dream!
Hindi Translation सिर पर सिर है ।
सिर का सिर निगला था
मरकर दूध स्वाद चख सके तो,
रथ की कीली समझे तो वह योग!
शिशु देखा सपने की तृप्ति
क्या तुममें है गुहेश्वरा?
Translated by: Eswara Sharma M and Govindarao B N
Tamil Translation தலையின்மீது தலை இருந்ததன்றோ,
தலைகளைத் தலை விழுங்கியதன்றோ
மடிந்து, பாலின் சுவையை அறியவியன்றால்
தேரின் மூலத்தை அறியின் அது யோகமாம்!
குழந்தை கண்ட கனவிலுள்ள நிறைவு
உன்னிடம் உள்ளதோ குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೀಲು = ರಹಸ್ಯ, ಮೂಲ; ತಲೆ = ಜ್ಞಾನ; ರಥ = ದೇಹ ಮತ್ತು ಜಗತ್ತು, ವಿಶ್ವಚಕ್ರ; ಸತ್ತು = ಬೆರೆದು ಒಂದಾಗಿ; ಸವಿ = ಅನುಭವಿಸು; ಹಾಲು = ಪರಮಾನಂದ;
Written by: Sri Siddeswara Swamiji, Vijayapura