ಅರಿವಿನೊಳಗೊಂದು ಮರವೆಯಿದೆ,
ಮರವೆಯೊಳಗೊಂದು ಅರಿವಿದೆ.
ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ವಯಲಿದೆ.
ತಾನೆಂಬಲ್ಲಿ ನಿಷ್ಪತಿಯಿದೆ.
ಇದೇನು ಹೇಳಾ ಗುಹೇಶ್ವರಾ?
Transliteration Arivinoḷagondu maraveyide,
maraveyoḷagondu arivide.
Arivu maraveyemberaḍū aḷidaḍe nirvayalide.
Tānemballi niṣpatiyide.
Idēnu hēḷā guhēśvarā?
Hindi Translation ज्ञान में एक भूल है।
भूल में एक ज्ञान है।
ज्ञान भूल दोनों नाश हो तो निर्वयल है।
अहं कहने में निष्पत्ती है, यह क्या कहो गुहेश्वरा ।
Translated by: Eswara Sharma M and Govindarao B N
Tamil Translation அறிவினுள்ளே ஒரு மறதியுள்ளது
மறதியினுள்ளே ஒரு அறிவுள்ளது.
அறிவு, மறதி எனுமிரண்டும் அழியின் வயலாம்
தானென்பதில் ஒருமிக்கும் நிலை உள்ளது.
இது என்னவென்று கூறுவாய் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಆತ್ಮಜ್ಞಾನ; ಅಳಿದಡೆ = ಅಡಗಿದರೆ; ತಾನು = ಆ ನಿರ್ಬಯಲೇ ತಾನು; ನಿರ್ವಯಲು = ಮಹಾಶೂನ್ಯ, ನಿಃಕಲಲಿಂಗ, ದ್ವಂದ್ವಭಾವಗಳಿಲ್ಲದ ಸತ್ಯ; ನಿಷ್ಪತಿ = ಸಮರಸಸ್ಥಿತಿ; ಮರವು = ಆತ್ಮವಿಷಯಕ ಅಜ್ಞಾನ;
Written by: Sri Siddeswara Swamiji, Vijayapura