ಆಕಾಶದ ಬೀಜ ಅಗ್ನಿಯಲೊದಗಿ,
ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು.
ಅರಿದೆಹೆನೆಂಬವನನಾರಡಿಗೊಂಡಿತ್ತು.
ಈ ನಿರ್ಣಯವನರಿಯದ ಮಾನವಾ,
ಗುಹೇಶ್ವರನೆಂಬುದು ಬಯಲ ವಿಕಾರ!
Transliteration Ākāśada bīja agniyalodagi,
śākhavillade moḷetu pallavisittu.
Aridehenembavananāraḍigoṇḍittu.
Ī nirṇayavanariyada mānavā,
guhēśvaranembudu bayala vikāra!
Hindi Translation आकाश बीज अग्नि में मिलकर
बिना शाखा अंकुरित विकसित हुआ।
समझनेवाले का भाव विरोध।
यह निर्णय न समझनेवाला मानव,
गुहेश्वर कहना शून्य रूप।
Translated by: Eswara Sharma M and Govindarao B N
Tamil Translation ஆகாயத்தின் விதை அனலுடன் தொடர்புற்று
வேறுபட்டவடிவமின்றி, முளைத்துத் துளிர்த்தது.
அறிந்துள்ளேன் என்பவனின் உணர்வு மாறுபட்டது
உண்மையை உணரா மனிதனே, குஹேசுவரன் வயலன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗ್ನಿ = ಪರಿಶುದ್ದವಾದ ಮತಿ; ಅರಿ = ಭಿನ್ನವಿಟ್ಟು ತಿಳಿ; ಆಕಾಶದ ಬೀಜ = ಗುರು ಕರುಣಿಸುವ ಆತ್ಮಭೋಧೆ; ಆರಡಿಗೊಳ್ = ವಿರೋಧವಾಗು; ಒದಗು = ಸಂಪರ್ಕಗೊಳ್ಳು; ನಿರ್ಣಯ = ಸತ್ಯಸಂಗತಿ, ಸ್ವರೂಪ; ಪಲ್ಲವಿಸು = ಬೆಳೆದು ಹೂ-ಹಣ್ಣುಗಳನ್ನು ಈಯು; ಮೊಳೆ = ಅಂಕುರಿಸು, ಚಿಗಿ; ವಿಕಾರ = ರೂಪ; ಶಾಖೆ = ಭಿನ್ನ ಆಕಾರ;
Written by: Sri Siddeswara Swamiji, Vijayapura