Index   ವಚನ - 63    Search  
 
ಭೂರಿ ಅವಾರಿಗಳಲ್ಲಿ ಮಾಡುವುದೆ ರಾಜತ್ವ. ಆ ಠಾವಿನಲ್ಲಿ ಕೂಡಿ ಆಡುವುದೆ ಸಮಯಭೇದ. ರಾಜಸವನರಿವನ್ನಕ್ಕ ತಾಮಸದಲ್ಲಿ ಪೂಜಿಸಿಕೊಳ್ಳಬೇಕು. ಆ ಗುಣ ವಿಷವ ಕಡೆದು ಅಮೃತವ ಕಾಬಂತೆ. ಉಭಯದ ಸಿಕ್ಕು, ಕಾಲಾಂತಕ ಭೀಮೇಶ್ವರಲಿಂಗವನು ಒಪ್ಪದ ಭಕ್ತಿ.