Index   ವಚನ - 64    Search  
 
ಮತ್ತಾರನೂ ನುಡಿಯದೆ ತಾನಾರೈದು ಮಾಡುವ ಪರಿಯಿನ್ನೆಂತು? ಸಜ್ಜನ ಶರಣರಲ್ಲಿ ಭಕ್ತಿ, ಅಸಜ್ಜನ ದುರ್ವೃತ್ತರಲ್ಲಿ ಧಿಕ್ಕಾರ. ಬಿಡುಮುಡಿಯಲ್ಲಿ ನಿಜತತ್ವವನರಿದು ಮಾಡುವುದು ಮಾಡಿಸಿಕೊಂಬುದು ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಮರ್ಪಿತ.