Index   ವಚನ - 65    Search  
 
ಮರೆವೆಗೆ ಅರಿವು ಸಂಬಂಧವಹಲ್ಲಿ ಮನ ತುಂಬಿದ ತಮಕ್ಕೆ ಜ್ಯೋತಿ ಒಂದೆ ಅವಗವಿಸಿದಂತೆ, ಪ್ರಕೃತಿ ಚಿತ್ತವನರಿವುದಕ್ಕೆ ಮತ್ತಗಜವ ಹಾರೆಯಲ್ಲಿ ಒತ್ತೆ, ಮೇಲಿದ್ದವನ ಚಿತ್ತವನರಿದಡಗುವಂತೆ ಸಂಸಾರಯುಕ್ತಿಯನರಿವವನ ಮಥನ. ಲೋಹ ಘನವಾಗಿ, ಸಿದ್ದಿಯ ಸಾರ ಅಲ್ಪವಾಗಿ ವೇಧಿಸುವಂತೆ ಘನ ಶೈಲಕ್ಕೆ ಅಂಗುಲದೊಳಗಡಗಿದ ಕುಲಿಶದಂತೆ, ಮರೆದಲ್ಲಿ ಅರಿದು ಎಚ್ಚತ್ತು ಅರಿವವನ ವಿವರ; ಪೂಜಿಸಿ ಪುಣ್ಯವನರಿವ ಭಾವಶುದ್ಧಾತ್ಮನ ಭಾವಸ್ಥಲ; ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಉಭಯ ನಾಮ ತೆರನಿಲ್ಲದ ತೆರ.