Index   ವಚನ - 67    Search  
 
ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ ಆಶ್ಚರಿಯೆಂಬುದು ಬಿಟ್ಟಿತ್ತು. ಅಂಗದ ಮೇಲಣ ಲಿಂಗ ನೆನಹಿಂಗೆ ನಿಲಲಾಗಿ ಕುರುಹೆಂಬ ಭಾವವಡಗಿತ್ತು. ಸರ್ವೇಂದ್ರಿಯಂಗಳು ಹಿಂಗಿ ಏಕಭಾವ ಸಲೆಸಂದು ಉಭಯದಂಗ ಲೇಪವಾದುದು ಕಾಲಾಂತಕ ಭೀಮೇಶ್ವರಲಿಂಗ ದ್ವಂದ್ವವಳಿದು ನಿಂದಸ್ಥಲ.