ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ?
ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ?
ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ
ಆಶೆಯ ಪಾಶವ ಕೊಲ್ಲಬಲ್ಲುದೆ?
ಮರೆಯ ಗ್ರಾಸವ ಕೊಂಬ ಮರ್ತ್ಯನಂತೆ
ಈಷಣತ್ರಯಕ್ಕೆ ಮೆಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ
ಈ ಯಾಚಕರುಗಳಿಗೆ ಏತರ ಬೋಧೆ ?
ಇದು ನಿಹಿತದ ಉಭಯಸ್ಥಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
Art
Manuscript
Music
Courtesy:
Transliteration
Kallinalli huṭṭida kiḍi kalla suḍaballude?
Belladalli huṭṭida sārava nis'sāra mellaballude?
Intī ballatanavuḷḷavaralliya vācakatva
āśeya pāśava kollaballude?
Mareya grāsava komba martyanante
īṣaṇatrayakke mecci, mātina māleya nītiya hēḷuva
ī yācakarugaḷige ētara bōdhe?
Idu nihitada ubhayasthala
cannabasavaṇṇapriya bhōgamallikārjunaliṅgadalli.