ವಚನ - 617     
 
ಹೊರಸಿನೆಕ್ಕೆಯ ಶಂಖದ ಮಣಿಯ ಪವಣಿಸಬಲ್ಲವರು ನೀವಾರಾದಡೂ ಪವಣಿಸಿರಯ್ಯಾ, ಇದ ನಾನರಿಯೆನಯ್ಯಾ. ಒಂದು ತಾಳಮರದ ಮೇಲೆ ಮೂರು ರತ್ನವಿಹುದ ನಾ ಬಲ್ಲೆ: ಒಂದು ರತ್ನ ಉತ್ಪತ್ಯ - ಸ್ಥಿತಿ - ಲಯಕ್ಕೊಳಗಾಯಿತ್ತು. ಒಂದು ರತ್ನ ಹದಿನಾಲ್ಕು ಭುವನಕ್ಕೆ ಬೆಲೆಯಾಯಿತ್ತು. ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು ಗುಹೇಶ್ವರ ಲಿಂಗೈಕ್ಯವು, ʼನಿಶ್ಶಬ್ದಂ ಬ್ರಹ್ಮ ಉಚ್ಯತೇʼ ಎಂದುದಾಗಿ.