ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.
ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು.
ಬೆಟ್ಟವ ಬೆಳ್ಳಕ್ಕಿ ನುಂಗಿತ್ತು. ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ.
ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ!
Transliteration Oṭṭeya mari mūroṭṭeyanikkittu.
Kaṭṭugradiruhe kattaleya nuṅgittu.
Beṭṭava beḷḷakki nuṅgittu. Suṭṭudu eddu kuḷḷiddudayyā.
Kaṭṭirdudu tōrade guhēśvaranalliye aḍagittu nōḍā!
Hindi Translation ऊँट का बछडे ने तीन बछडों को जन्म दिया।
चींटा अंधकार निगला था।
बगला पहाड निगला था।
जला हुआ उठ बैठा था।
बांधा बिना दिखाये गुहेश्वर में समा गया।
Translated by: Eswara Sharma M and Govindarao B N
Tamil Translation ஒட்டகக்குட்டி மூன்று குட்டிகளை ஈன்றது,
ஆழ்ந்த அறிவுடன் இருளை விழுங்கியது,
மலையை அன்னம் விழுங்கியது,
எரிந்தது எழுந்து அமர்ந்தது ஐயனே.
பரம்பொருள் என்னும் உணர்வும் எழாமல்
குஹேசுவர இலிங்கத்திலேயே அடங்கியது காணாய்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇರುಹೆ = ಶುದ್ದವಾದ ಆತ್ಮ ನಾನೆಂಬ ಗಟ್ಟಿಯಾದ ತಿಳಿವಳಿಕೆ; ಒಟ್ಟೆ = ಒಂಟೆ; ಅತ್ಯುನ್ನತ ತತ್ವ್ತದ ಸಂಕೇತ, ಪರಮಾತ್ಮ; ಕತ್ತಲೆ = ನಾನು ಜೀವನೆಂಬ ಭ್ರಮಾಂಧಕಾರ; ನುಂಗು = ಕಬಳಿಸು, ಇಲ್ಲದಾಗಿಸು; ಬೆಟ್ಟ = "ನಾನು ಜೀವಾತ್ಮ" ಎಂಬ ಅಹಂಭಾವ; ಬೆಳ್ಳಕ್ಕಿ = "ನಾನು ನಿರ್ಮಲಾತ್ಮ" ಎಂಬ ಪವಿತ್ರಭಾವ; ಮರಿ = ಆ ಪರಮಾತ್ಮನ ಚಿದಂಶವಾದ ಆತ್ಮ; ಮೂರು ಒಟ್ಟೆ = ಮೂರು ಮರಿ ಒಂಟೆಗಳು, ಮೂರು ಬಗೆಯ ಜೀವಾತ್ಮರು;
Written by: Sri Siddeswara Swamiji, Vijayapura