Index   ವಚನ - 3    Search  
 
ಆರಾರಿಗೂ ಅಗೋಚರ ಅಸಾಧ್ಯವೆಂಬ ಅಷ್ಟಪುರಿಯೆಂಬ ಬಟ್ಟಬಯಲ ಪಟ್ಟಣದೊಳಗೆ ಪಚ್ಚೆರತ್ನ ಮುತ್ತು ಮಾಣಿಕ್ಯ ತೆತ್ತಿಸಿದ ಶಿವಾಲಯವೆಂಬುದೊಂದು ಗುಡಿಯುಂಟು. ಆ ಗುಡಿಯೊಳಗೊಂದು ಒಂಬತ್ತು ನೆಲೆಯ ಪಾಣಿವಟ್ಟ, ಒಂದೆ ಮುಖ. ಅದರ ಮೇಲೊಂದು ಅನಂತ ಪ್ರಕಾಶವ ಗರ್ಭೀಕರಿಸಿಕೊಂಡಿರ್ಪುದೊಂದು ಲಿಂಗವುಂಟು. ಆ ಲಿಂಗಕ್ಕೆ ನೋಡಬಾರದ ಪೂಜೆಯ ಮಾಡಬೇಕು. ನುಡಿಯಬಾರದ ಮಂತ್ರವ ತುಂಬಬೇಕು. ಹಿಡಿಯಬಾರದ ಜಪವ ನುಡಿಗೆಡೆಯಿಲ್ಲದೆ ಮಾಡಬೇಕು. ಕೊಡಬಾರದ ಅರ್ಪಿತವ ಕೊಡಬೇಕು. ನೆನೆಯಬಾರದ ನೆನಹು ನೆಲೆಗೊಂಡಾತನೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣಂಗಲ್ಲದೆ ಉಳಿದವರಿಗಸಾಧ್ಯವಯ್ಯ.