•  
  •  
  •  
  •  
Index   ವಚನ - 626    Search  
 
ಹಸಿವಿನ ಪ್ರೇಮಕ್ಕೆ ಹುಸಿದು ಬೋನವ ಹಿಡಿವರು. ತೃಷೆಯ ಪ್ರೇಮಕ್ಕೆ ಕುಸಿದು ಮಜ್ಜನಕ್ಕೆರೆವರು. ಅವರಿಗೆ ದೇವರಿಲ್ಲ ಭಕ್ತರಿಲ್ಲ; ನಾನೂ ಇಲ್ಲ ನೀನೂ ಇಲ್ಲ; ಗುಹೇಶ್ವರಾ, ಪೂಜಿಸುವರೂ ಇಲ್ಲ, ಪೂಜೆಗೊಂಬವರೂ ಇಲ್ಲ. ಕಾಣಾ ಸಂಗನಬಸವಣ್ಣಾ.
Transliteration Hasivina prēmakke husidu bōnava hiḍivaru. Tr̥ṣeya prēmakke kusidu majjanakkerevaru. Avarige dēvarilla bhaktarilla; nānū illa nīnū illa; guhēśvarā, pūjisuvarū illa, pūjegombavarū illa. Kāṇā saṅganabasavaṇṇā.
Hindi Translation भूख के कारण नैवेद्य चढाते। प्यास के कारण अभिषेक करते। देव नहीं, भक्त नहीं, मैं नहीं, तुम नहीं ; गुहेश्वरा पूजा करनेवाले भी नहीं, पूजा पानेवाले भी नहीं । Translated by: Eswara Sharma M and Govindarao B N
Tamil Translation பசியின் விருப்பத்தால் படையலைப் படைப்பர் தாகத்தின் விருப்பத்தால் திருமஞ்சனம் செய்வர் இறைவனில்லை, பக்தனில்லை, நானுமில்லை, நீயுமில்லை குஹேசுவரனே, பூஜிப்பவருமில்லை, பூஜையை ஏற்பவருமில்லை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಬೋನ = ಎಡೆ; ಮಜ್ಜನ = ಸ್ನಾನ; Written by: Sri Siddeswara Swamiji, Vijayapura