•  
  •  
  •  
  •  
Index   ವಚನ - 632    Search  
 
ಹೊರಗನೆ ಕೊಯ್ದು ಹೊರಗನೆ ಪೂಜಿಸಿ ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ. ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ, ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ! ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ ತನು ಸಂದಣಿಸಿತ್ತು ಗುಹೇಶ್ವರಾ.
Transliteration Horagane koydu horagane pūjisi horagāgi hōyittu traijagavella. Ānadanariyadante liṅgava pūjisa hōdaḍe, kai liṅgadalli silukittallā! Mana dr̥ḍhadinda nim'ma nenedihenendaḍe tanu sandaṇisittu guhēśvarā.
Hindi Translation बाहर चुनकर बाहर की पूजाकर, बाहर ही हुआ त्रैजगत् । मैं उसे न जानकर पूजा करें तो क्रिया लिंग में हाथ फँस गया था। दृढ मन से तुम्हें याद करे तो शरीर मिला गुहेश्वरा। Translated by: Eswara Sharma M and Govindarao B N
Tamil Translation புறத்திலுள்ளதைக் கொய்து, புறத்திலுள்ளதைப் பூஜித்து புறமாகச் சென்று விட்டது மூவுலகமெலாம், அகத்திலேயே பூஜிக்கச் சென்றால் கை இலிங்கத்திலே அடங்கியதன்றோ! மன உறுதியுடன் உம்மை நினைய விழையின் உடலும் இணைந்தது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೈ = ಕ್ರೀ, ಕ್ರಿಯೆ; ದೃಢ = ನಿಶ್ಚಲ; ಸಂದಣಿಸು = ಸೇರು; ಸಿಲುಕು = ಅಡಗಿಹೋಗು; ಹೊರಗನು = ಹೊರಗಿನ ಪುಷ್ಪಾದಿಗಳನ್ನು; ಹೊರಗನು = ಹೊರಗಿನ ಲಿಂಗವನ್ನು; ಹೊರಗಾಗಿ ಹೋಗು = ಲಿಂಗಕ್ಕೆ ಭಿನ್ನವಾಗಿಯೆ ಉಳಿ; Written by: Sri Siddeswara Swamiji, Vijayapura