•  
  •  
  •  
  •  
Index   ವಚನ - 646    Search  
 
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ? ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ. ಭಾವಿಸುವ ಭಾವನೆಗಿಂದ ಸಾವು[ದೆ] ಲೇಸು ಕಾಣಾ ಗುಹೇಶ್ವರಾ.
Transliteration Otti haṇṇa māḍidaḍe adettaṇa ruciyappudo? Kāmisi kalpisi bhāvisidaḍe ade bhaṅga. Bhāvisuva bhāvaneginda sāvu[de] lēsu kāṇā guhēśvarā.
Hindi Translation जबरदस्ती से फल करें तो कहाँ की रुची ? चाह से कल्पित करके जानने से वहीं भंग। जानने की भावना से मरना ही अच्छा देखो गुहेश्वरा। Translated by: Eswara Sharma M and Govindarao B N
Tamil Translation அழுத்திக் கனிய வைத்தால் அதில் சுவையிருக்குமோ? விரும்பி, கற்பித்து உணர்ந்தால் அதற்கதே தடையாம். எண்ணும் எண்ணத்தைவிட மடிவதே நன்றாம் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಲ್ಪಿಸು = ಕಲ್ಪನೆಯ ಮೂಲಕ ಗ್ರಹಿಸು; ಕಾಮಿಸು = ಬಯಸು; ಭಂಗ = ಕೊರತೆ, ಅಡತಡೆ; ಭಾವಿಸು = ಭಾವಕ್ಕೆ ತಂದುಕೊಳ್ಳು; Written by: Sri Siddeswara Swamiji, Vijayapura