Index   ವಚನ - 32    Search  
 
ಅಯ್ಯಾ, ಭಕ್ತ ಜಂಗಮದ ವಿವರವೆಂತೆಂದಡೆ ಭಕ್ತನ ಅಂಗ ಮನ ಪ್ರಾಣಂಗಳೆಲ್ಲ ಭಸ್ಮಘುಟಿಕೆಗಳಂತೆ. ಜಂಗಮದ ಅಂಗ ಮನ ಪ್ರಾಣಂಗಳೆಲ್ಲ ರುದ್ರಾಕ್ಷಿಮಣಿಯಂತೆ. ಭಕ್ತನ ಅಂಗತ್ರಯಂಗಳು ಪಂಚಲೋಹಗಳಂತೆ. ಜಂಗಮದ ಅಂಗತ್ರಯಂಗಳು ಮೃತ್ತಿಕೆ ಭಾಂಡದಂತೆ. ಭಕ್ತನ ಅಂಗತ್ರಯಂಗಳು ಬಂಗಾರದಂತ ಜಂಗಮದ ಅಂಗತ್ರಯಂಗಳು ಮೌಕ್ತಿಕದಂತೆ. ಭಕ್ತನ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ ಪ್ರಾಯಶ್ಚಿತ್ತವುಂಟು. [ಜಂಗಮದ[ ಅಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ. ಪ್ರಾಣವೇ ಪ್ರಾಯಶ್ಚಿತ್ತವಲ್ಲದೆ ಪೂರ್ವಾಚಾರಕ್ಕೆ ಯೋಗ್ಯವಲ್ಲ ಕಾಣಾ. ಮಹಾಘನ ಭಕ್ತಜಂಗಮದ ಸತ್ಯ ನಡೆನುಡಿಯ ವಿಚಾರವೆಂತೆಂದಡೆ: ಗುರುಲಿಂಗಜಂಗಮವಲ್ಲದೆ ಅನ್ಯಾರ್ಚನೆ, ಪಾದೋದಕ ಪ್ರಸಾದವಲ್ಲದೆ ಭಂಗಿ ಮದ್ದು ತಂಬಾಕು ನಾನಾ ಗಿಡಮೂಲಿಕೆ ವೈದ್ಯ ಫಲಾಹಾರ ಕ್ಷೀರಾಹಾರ, ಸ್ವಸ್ತ್ರೀಯಲ್ಲದೆ ಪರಸ್ತ್ರೀ ಗಮನ, ಸತ್ಯಕಾಯಕ ಭಿಕ್ಷಾಹಾರವಲ್ಲದೆ ಚೋರತನ ಕುಟಿಲ ಮಂತ್ರಗಾರಿಕೆ ವೈದ್ಯ ಋಣಭಾರವಿಂತಿವನು ಹಿಡಿದಾಚರಿಸುವಾತನು ಸತ್ಯಸಹಜಜಂಗಮವಲ್ಲ ಕಾಣಾ, ಕಲಿದೇವರದೇವ.