ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು.
ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ
ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ,
ಏನೆಂಬೆ ಗುಹೇಶ್ವರಾ?
Transliteration Kāyadoḷage karuḷuḷḷannakkara hasivu māṇadu.
Kāyadoḷagaṇa karuḷa tegedu kaṅgaḷa mēlirisi
idanaḍigeya māḍi gaḍaṇisuttidde,
ēnembe guhēśvarā?
Hindi Translation शरीर में आंत रहने तक भूख नहीं मिठती।
शरीर से आंत निकालकर आँखों पर रख,
इसे पकाकर नैवेद्य रखे तो;
क्या कहना गुहेश्वरा ?
Translated by: Eswara Sharma M and Govindarao B N
Tamil Translation உடலிலே குடலுள்ளவரை பசி விடாது,
உடலிலுள்ள குடலை எடுத்து கண்களின் மீதிட்டு,
சமைத்துப் படைத்து நிவேதனம் செய்தேன்.
என்னென்பேன் குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡಗು = ಅಡುಗೆಯ ಮಾಡು; ಕಂಗಳು = ಬಾಹ್ಯಾಂತರ ದೃಷ್ಟಿಗಳು, ಆ ದೃಷ್ಟಿಗಳಲ್ಲಿ ತುಂಬಿದ ನಿರ್ಮಲ ಲಿಂಗ; ಕರಳು = ಅನುರಾಗ; ಕಾಯ = ಸೂಕ್ಷ್ಮದೇಹ; ಗಡಣಿಸು = ನಿವೇದಿಸು; ಮಡಗು = ಮೀಸಲಳಿಯದಂತೆ ಇಡು; ಮಾಣು = ಇಲ್ಲದಾಗು, ಬಿಡು; ಹಸಿವು = ವಿಷಯತೃಷ್ಣೆ, ವಿಷಯಾಸಕ್ತಿ;
Written by: Sri Siddeswara Swamiji, Vijayapura