ಆರು ಬಣ್ಣದ ಮೃಗವು ತೋರಿಯಡಗಿತ್ತು.
ಬಯಲ ಮೂರು ಲೋಕದೊಳಗೆ ಸಾರಿ, ಹೆಜ್ಜೆಯ ನೋಡಿ
ತೊರೆಯ ಬೆಂಬಳಿವಿಡಿದು ತೋಹಿನಲ್ಲಿಗೆ ಬಂದಿತ್ತು, ಮೃಗವು.
``ಸೋsಹಂ ಸೋsಹಂ'' ಎನ್ನುತ್ತಿದ್ದಿತ್ತು,
ಇಹಪರವ ಮೀರಿ ನಿಂದಿತ್ತು.
ತೋರಲಿಲ್ಲದ ಬಿಲ್ಲು ಬೇರೆನಿಸದ ಬಾಣ,
ಅರುಹಿನ ಕೈಯಲ್ಲಿ ಕುರುಹ ಬಾಣಸವ ಮಾಡಿ
ತೆರಹಿಲ್ಲದ ಪಾಕದಲ್ಲಿ ಅಡಿಗೆಯ ಮಾಡಿದ ಬೋನವ
ಅರ್ಪಿತವ ಮಾಡಿದ ಪ್ರಸಾದದಿಂದ ಸುಖಿಯಾದೆ
ಗುಹೇಶ್ವರಾ.
Hindi Translationछ: रंग का मृग दीखता छिपता था।
तीन लोकों में शून्य छाकर, कदम देखकर,
झरने के किनारे एकांत स्थल में आया।
मृग सोऽहं सोऽहं कह रहा था।
इह पर पार खडा था
न दिखाया धनुष, न टूटा तीर ,
ज्ञान के हाथ में चिह्न पकाकर,
बिना रोक-थाम आग में पकाया हुआ नैवेद्य को
अर्पित किये प्रसाद से सुखी हुआ गुहेश्वर।
Translated by: Eswara Sharma M and Govindarao B N
English Translation
Tamil Translationஆறுவண்ணமுள்ள விலங்கு தோன்றிமறைந்தது,
பரந்த மூவுலகிலே, அருகிலேசென்று, மெல்ல நடந்து
துறையிலே நுழைந்து, அனுசரித்து மறையிடத்திற்கு வந்தது.
விலங்கு “ஸோSஹம்” என்று கூறியது.
இக, பரத்தை மீறி நின்றது.
புலப்படாதவில், ஒருமுகப்பட்ட அம்பு!
ஞானக்கையிலே, சின்னமெனும் தூய சிவ ஞானத்தை
அத்துவைத அனுபவமெனும் தீயிலே சமைத்து,
அதனை அர்ப்பித்து, பிரசாதத்தால் இன்புற்றேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳು"ಸೋsಹಂ ಸೋsಹಂ" = ಆ ಶಿವನೇ ನಾನು, ನಾನೇ ಶಿವನು; ಅರಿವಿನ ಕೈ = ಸುಜ್ಞಾನ ಹಸ್ತ; ಆರು ಬಣ್ಣದ ಮೃಗ = ಅಸದ್ಭಾವ, ಜಡಭಾವ,ಸುಖ-ದುಃಖಭಾವ, ಅನಿತ್ಯಭಾವ, ಖಂಡಿತಭಾವ ಹಾಗೂ ಮೋಹಭಾವ-ಆರು ಲಕ್ಷಣಗಳಿಂದ ಕೂಡಿದ ಮಾಯಾಮೃಗ, ಮಾಯೆ; ಇಹಪರ = ಸ್ಥೂಲ ಹಾಗೂ ಸೂಕ್ಷ್ಮ ಜಗತ್ತು, ಸ್ಥೂಲ-ಸೂಕ್ಷ್ಮ ದೇಹ; ಕುರುಹು = ಮಾಯೆಯಳಿದುಳಿದ ಶುದ್ದವಿದ್ಯೆ; ತೆರೆಹಿಲ್ಲದ ಶಾಖ = ಅಂಗಲಿಂಗಭಾವವಳಿದ ಅದ್ವಯಾನುಭೂತಿಯೆಂಬ ಅಗ್ನಿ; ತೊರೆ = ಮನೋಪ್ರವಾಹ; ತೋರಲಿಲ್ಲದ ಬಿಲ್ಲು = ಭಿನ್ನಭಾವಕ್ಕೆಡೆಯಿಲ್ಲದ ಸದ್ಭಾವ; ತೋರಿಯಡಗು = ತೋರಿ ತೋರಿ ಅಡಗು; ತೋಹು = ಏಕಾಂತಸ್ಥಳ; ಬಯಲ ಮೂರು ಲೋಕ = ವಿಸ್ತಾರವಾಗಿ ಹರವಿದ ಮೂರು ಲೋಕಗಳು; ಬಾಣಸವ ಮಾಡು = ಪಾಕಗೊಳಿಸು; ಬೆಂಬಳಿವಿಡಿ = ಅನುಸರಿಸು; ಬೇರೆನಿಸದ ಬಾಣ = ಅವಿಚ್ಚಿನ್ನವಾದ ಧ್ಯಾನವೃತ್ತಿ; ಸಾರು = ಸಮೀಪಿಸು, ಪ್ರಕಟಗೊಳ್ಳು; ಹೆಜ್ಜೆಯ ನೋಡು = ಮೆಲ್ಲಗೆ ನಡೆ; Written by: Sri Siddeswara Swamiji, Vijayapura