•  
  •  
  •  
  •  
Index   ವಚನ - 665    Search  
 
ನಿರಾಳವೆಂಬ ಶಿಶುವಿಂಗೆ ಪೃಥ್ವಿಯೆಂಬ ತೊಟ್ಟಿಲು, ನಿಜೈಕ್ಯವೆಂಬ ತಾಯಿ ಬಂದು ಮೊಲೆಯ ಕೊಟ್ಟು ಬೆಣ್ಣೆಯನಿಕ್ಕಿ, ವಾಯು ಬಂದು ತೊಟ್ಟಿಲ ತೂಗಿ ಜೋಗುಳವಾಡಿದಡೆ, ಆಕಾಶ ಬಂದು ಶಿಶುವನೆತ್ತಿಕೊಂಡು ಬೆಳೆಯಿಸಿತ್ತಲ್ಲಾ! ನಿರಾಳವೆಂಬ ಹಸಿವು ತೃಷೆಯ ಶಿಶುವಿಂಗೆ ಬೇಕೆಂದು ಮುಗ್ಧೆಯ ಬೆಸಗೊಳಲರಿಯರು ಮೂರು ಲೋಕವು ಗುಹೇಶ್ವರಾ.
Transliteration Nirāḷavemba śiśuviṅge pr̥thviyemba toṭṭilu, nijaikyavemba tāyi bandu moleya koṭṭu beṇṇeyanikki, vāyu bandu toṭṭila tūgi jōguḷavāḍidaḍe, ākāśa bandu śiśuvanettikoṇḍu beḷeyisittallā! Nirāḷavemba hasivu tr̥ṣeya śiśuviṅge bēkendu mugdheya besagoḷalariyaru mūru lōkavu guhēśvarā.
Music Courtesy: Program Name : Paramaguru Sri Allama Prabhu Devara Vachanagalu Singer Name : B.R. Chaaya Music Director : Parvathi Sutha Music Label : MRT Music
Hindi Translation निराला जैसा शिशु को पृथ्वी जैसे पालना। निजैक्य जैसी माँ ने आकर दूध पिलाकर, माखन खिलाया। वायु आकर पालना झूलते लोरी गाये तो, आकाश आकर शिशु उठाकर बड़ा किया था। निराला जैसी भूख-प्यास शिशु को चाहे तो तीन लोक की मुग्धा कह नहीं सकती गुहेश्वरा। Translated by: Eswara Sharma M and Govindarao B N
Tamil Translation வெட்டவெளி ஞானமெனும் குழந்தைக்கு நிலமெனும் தொட்டில், பராசக்தியெனும் தாய்வந்து பாலூட்டி, வெண்ணெயை ஊட்டிட, வாயு தொட்டிலை யசைத்து தாலாட்டிட, ஆகாயம் குழந்தையை எடுத்து வளர்த்ததன்றோ, சிவஅத்துவைத ஞானம் எனும் பசி வேட்கை குழந்தைக்கு வேண்டுமென சக்தியிடம் மூவுலகும் கேட்டு உணரலறியார் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶ = ಅನುಭೂತಿ, ಬ್ರಹ್ಮಾನುಭೂತಿ; ಜೋಗುಳ = ಶಿವೋಹಂ ಎಂಬ ಪವಿತ್ರಭಾವ; ನಿಜೈಕ್ಯ = ಶಿವಾದ್ವೈತ ಜ್ಞಾನ; ನಿರಾಳ = ಬಯಲರೂಪ ಚೇತನ; ಪೃಥ್ವಿ = ಹೃದಯ; ಬೆಣ್ಣೆಯನು ಇಕ್ಕು = ಅನುಭಾವ-ಆತ್ಮಾನಂದವೆಂಬ ಬೆಣ್ಣೆಯನ್ನು ತಿನ್ನಿಸು; ಬೆಳೆ = ವ್ಯಾಪಿಸು, ಎತ್ತಿಕೊಳ್ಳು, ಅವಗ್ರಹಿಸು; ಮುಗ್ಧೆ = ನಿರ್ಮಲವಾದ ದಿವ್ಯಾನುಭೂತಿಯೆಂಬ ಶಕ್ತಿ; ಮೊಲೆಯ ಕೊಡು = ಹಾಲುಣಿಸು, ಆತ್ಮಜ್ಞಾನವೆಂಬ ಹಾಲನ್ನು ಉಣಿಸು; ವಾಯು = ಶಿವಸ್ಮರಣೆ; ಶಿಶು = ಜೀವಾತ್ಮ; Written by: Sri Siddeswara Swamiji, Vijayapura