ಕುರುಹಿನ ಪತಾಕೆಯ ಹಿಡಿದವಂಗೆ,
ಕೊರತೆ ಉಂಟೆ, ಆಳ್ದಂಗಲ್ಲದೆ ?
ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ?
ಎನ್ನ ಮರವೆ ನಿನ್ನ ಕೇಡಾದ ಕಾರಣ,
ನೀ ನಾನೆಂಬುದಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Kuruhina patākeya hiḍidavaṅge,
korate uṇṭe, āḷdaṅgallade?
Eccavaniddante ambige munivare?
Enna marave ninna kēḍāda kāraṇa,
nī nānembudakke modale, manasandittu mārēśvarā.