ಜೀವದಿಂದ ಕಾಬ ಅರಿವು, ಪ್ರಕೃತಿರೂಪಾಗಿಪ್ಪುದು.
ಪರಮನಿಂದ ಕಾಬ ಜ್ಞಾನ, ಸಂದೇಹಕ್ಕೊಡಲಾಗಿಪ್ಪುದು.
ಸಂದೇಹವೊಂದೆಂದು ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Jīvadinda kāba arivu, prakr̥tirūpāgippudu.
Paramaninda kāba jñāna, sandēhakkoḍalāgippudu.
Sandēhavondendu tiḷidalli, manasandittu mārēśvarā.