Index   ವಚನ - 69    Search  
 
ತೊರೆಯ ಹಾವನ್ನಕ್ಕ, ಒಂದು ಹರುಗೋಲ ಬೇಕು. ಹರುಗೋಲದೊಳಗಿಹನ್ನಕ್ಕ, ಒಂದು ಅಡಿಗಟ್ಟಿಗೆ ಬೇಕು. ತೊರೆ ಬತ್ತಿ, ಹರುಗೋಲ ಹಾಕಿ, ಅಡಿಗಟ್ಟಿಗೆ ಮುರಿದಲ್ಲಿ ತ್ರಿವಿಧವಲ್ಲಿ, ನಾನಿಲ್ಲಿ, ನೀನೆಲ್ಲಿ? ಮನಸಂದಿತ್ತು ಮಾರೇಶ್ವರಾ.