ತ್ರಿವಿಧಶಕ್ತಿಯನರಿದಲ್ಲಿ, ತ್ರಿಗುಣಾತ್ಮವ ಮರೆದಲ್ಲಿ,
ತ್ರಿಭೇದಂಗಳ ಕಾಬಲ್ಲಿ,
ತ್ರಿಗುಣ ತನ್ಮಯವಾಗಿ ಚರಿಸುವಲ್ಲಿ,
ಇಂತೀ ತ್ರಿಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Trividhaśaktiyanaridalli, triguṇātmava maredalli,
tribhēdaṅgaḷa kāballi,
triguṇa tanmayavāgi carisuvalli,
intī triguṇa ēkavādalli, manasandittu mārēśvarā.