Index   ವಚನ - 72    Search  
 
ಧೀರ, ಕೂರಲಗಿಂಗೆ ಹೆದರುವನೆ ? ಸಾರಧಿ ಸರ್ವಮಂತ್ರಕ್ಕಲಸುವಳೆ ? ಭಾರಿಯ ಜಾಣ, ಆರೈಕೆಗೊಳಗಹನೆ ? ಇವು ಮೀರಿ ಅರಿದ ಅರಿವು, ತ್ರಿವಿಧ ಹೋರಾಟಕ್ಕೆ ಒಡಲಪ್ಪುದೆ ? ಇದನರಿಯದ ಮುನ್ನವೆ ಅರಿದಾತಂಗೆ, ಮನಸಂದಿತ್ತು ಮಾರೇಶ್ವರಾ.