Index   ವಚನ - 73    Search  
 
ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ, ತುಂಬಿದ ತೊರೆಯ ಹಾಯಬಹುದೆ ? ಮಾತಿನಲ್ಲಿ ಶ್ರೇಷ್ಠನಾದೆನೆಂದಡೆ, ಶಿವಶರಣರ ನೇತಿಗಳೆಯಬಹುದೆ ? ಹಸುಳೆಗೆ ಗಲ್ಲವ ಕುಟ್ಟಿ ಹಾಲೆರೆದಡೆ, ಅದಾರಿಗೆ ಹಿತವೆಂಬುದನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.