ನಾ ನೀನೆಂಬ ಉಭಯವ ವಿಚಾರಿಸುವುದು ಅದೇನು ಹೇಳಾ ?
ನಾನೆಂದಡೆ ಎನಗೆ ಹೊರಗು, ನೀನೆಂದಡೆ ಉಭಯಭಿನ್ನ.
ಏನೂ ಎನ್ನದಿದ್ದಡೆ ಅರಿವಿಂಗೆ ಕುರುಹಿಲ್ಲ.
ಉಭಯವ ವಿಚಾರಿಸಿ ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Nā nīnemba ubhayava vicārisuvudu adēnu hēḷā?
Nānendaḍe enage horagu, nīnendaḍe ubhayabhinna.
Ēnū ennadiddaḍe ariviṅge kuruhilla.
Ubhayava vicārisi tiḷidalli, manasandittu mārēśvarā.