•  
  •  
  •  
  •  
Index   ವಚನ - 705    Search  
 
ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ. ಪ್ರಾಣದ ಕೊನೆಯ ಮೊನೆಯ ಮೇಲೆ, ಪೂರ್ಣದರಿವು ಅಳವಟ್ಟು ಭಾವಸೂತಕದ ಹೊದಕೆಯ ಕಳೆದು, ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾಧಿಯ ಘನವನು ಆರಿಗೆಯೂ ಕಾಣಬಾರದು ನೋಡಾ. ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ಜ್ಞಾನ ಕ್ರಿಯಾಚರಣೆಯ ನಿಲವ ಕಂಡು ನಾನು ಬದುಕಿದೆನು, ಕಾಣಾ ಚೆನ್ನಬಸವಣ್ಣಾ.
Transliteration Aṅgadalaḷavaṭṭa liṅgaikyana saṅgavanārigū kāṇabāradu nōḍā. Prāṇada koneya moneya mēle, pūrṇadarivu aḷavaṭṭu bhāvasūtakada hodakeya kaḷedu, nirbhāva nis'sūtakiyāgippa nijaliṅga samādhiya ghanavanu ārigeyū kāṇabāradu nōḍā. Guhēśvaraliṅgadalli saṅganabasavaṇṇana jñāna kriyācaraṇeya nilava kaṇḍu nānu badukidenu, kāṇā cennabasavaṇṇā.
Hindi Translation अंग में मिले लिंगैक्य का संग किसी को न देखना देखा। प्राण के छोर के कोर पर, भाव सूतक की ओडनी मिठाकर, निर्भाव निस्सूतकी बने निजलिंग समाधी का घन किसी को न देखना देखा। गुहेश्वर लिंग में संगनबसवण्णा की स्थिति देख मैं जीवित हूँ देखा चेन्नबसवण्णा। Translated by: Eswara Sharma M and Govindarao B N