ವಚನ - 726     
 
ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ ಇಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ತ್ರಿದೇವತೆಗಳಿಲ್ಲದ ಮುನ್ನ, ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ!