ಬಲ್ಲವ ತಾನಾದೆನೆಂಬಲ್ಲಿ,
ಮಿಕ್ಕಾದವರಲ್ಲಿ ಗೆಲ್ಲ ಸೋಲಕ್ಕೆ ಹೋರಿಹೆನೆಂಬಲ್ಲಿ,
ಆ ಬಲ್ಲತನವಲ್ಲಿಯೆ ನಿಂದಿತ್ತು.
ಈ ಉಭಯದಲ್ಲಿ ಎಲ್ಲಿಯೂ ತಾನಿಲ್ಲದೆ,
ಆ ಭಾವದ ಸೊಲ್ಲಿಗೆ ಸಿಕ್ಕದೆ,
ನಿಜವರಿತವರೆಲ್ಲರಲ್ಲಿ ಪರಿಪೂರ್ಣನಲ್ಲಿಯೆ,
ಕಾಮಧೂಮ ಧೂಳೇಶ್ವರಾ.
Art
Manuscript
Music
Courtesy:
Transliteration
Ballava tānādenemballi,
mikkādavaralli gella sōlakke hōrihenemballi,
ā ballatanavalliye nindittu.
Ī ubhayadalli elliyū tānillade,
ā bhāvada sollige sikkade,
nijavaritavarellaralli paripūrṇanalliye,
kāmadhūma dhūḷēśvarā.