Index   ವಚನ - 78    Search  
 
ಬಸವಣ್ಣನ ಡಿಂಗರಿಗನಯ್ಯಾ, ಚನ್ನಬಸವಣ್ಣನ ಹಳೆಯನಯ್ಯಾ, ಪ್ರಭುದೇವರ ಬಂಟನಯ್ಯಾ, ಮಡಿವಾಳಯ್ಯನ ಲೆಂಕನಯ್ಯಾ, ಸಿದ್ಧರಾಮಯ್ಯನ ಭೃತ್ಯನಯ್ಯಾ. ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು, ಬದುಕಿದೆನಯ್ಯಾ. ಕಾಮಧೂಮ ಧೂಳೇಶ್ವರಾ. ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ, ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.