Index   ವಚನ - 96    Search  
 
ವ್ಯೋಮದಲ್ಲಿ ತೋರುವ ತೋರಿಕೆ, ಸಾಮವ ಮುಟ್ಟಿ ಬೆರಸಬಲ್ಲುದೆ? ಸಾಗರ ಸಂಬಂಧಕ್ಕೆ ಕಟ್ಟು ಒಡೆವುದೆ ? ಮಹದಲ್ಲಿ ಬೆರಸಿದ ಮಹಾಯೋಗಿ, ಸಂಸಾರಸಾಗರದ ಸಂಬಂಧಕ್ಕೆ ಒಳಗಪ್ಪನೆ ? ಇಂತೀ ಸೂತಕವಳಿದ ಅಜಾತಂಗೆ ಏತರಲ್ಲಿ ನಿಂದು ನೋಡಿದಡೂ ನಿರ್ಜಾತ ಶೂನ್ಯ ಕಾಮಧೂಮ ಧೂಳೇಶ್ವರಾ.